ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು. ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ. ಈಗಿನ ಕಾಲಕ್ಕೆ ಇದು ಕೇವಲ "ಅಹಂ ಬ್ರಹ್ಮಾಸ್ಮಿ" " ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು" ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯ ಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವ ವಿಧವಾದ ಸಂಬಂಧವೂ ಇರುವದಿಲ್ಲ. ಇದರ ಬಗ್ಗೆ ಪ್ರಶ್ನೋತ್ತರಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರುಹೊತ್ತಿಗೆಯನ್ನು ಪರಿಚಯಿಸಿ ಕೊಡುತ್ತಿದ್ದೇನೆ.